Blog

Black Wheat

Black wheat has many health benefits and has many important nutrients and eating it also increases the body's immunity. Black wheat contains antioxidants, B vitamins, folic acid, selenium, magnesium, manganese, zinc, calcium, iron, copper, potassium, fibre and amino acids, which make this wheat rich in nutrients What Is Black Wheat ? We may normally use white wheat for daily routine, but black wheat is much healthier as compared to white wheat. Black wheat has many health benefits and has many important nutrients and eating it also increases the body’s immunity. Black wheat contains antioxidants, B vitamins, folic acid, selenium, magnesium, manganese, zinc, calcium, iron, copper, potassium, fibre and amino acids, which make this wheat rich in nutrients. Assorted grains ( Black Wheat & Regular Wheat ) Some of the Key Benefits of Black Wheat: Reduce Obesity. Diabetes Is Controlled. Low Blood Pressure. Cholesterol Level Does Not Increase. Remove Constipation. How Black Wheat Introduced? The species of wheat are introduced year ago but after research of many years. The black wheat was produced in the National Agro-food Biotechnology Institute University, Mohali Punjab, in 2017. As per the latest news, the institute has a patented Black Wheat now. How Black Wheat Introduced? What makes black wheat different in color is the pigment named “Anthocyanin” that also determines the colors of fruits and vegetables. The concentration of these pigments determines the color of other natural edibles. Regular wheat has a 5ppm (Parts-Per-Million) concentration of anthocyanin; on the other hand, black wheat grain is reported to have around 100-200ppm of anthocyanin (exact figures: 140 ppm). This makes black wheat, scientifically, a healthier option. These Anthocyanin are the naturally occurring antioxidants that develop in a field at the time of grain filling, hence enriching the wheat with loads of nutritional value.

3/8/20230 min read

Finger millet ರಾಗಿ

"ರಾಗಿ ಆಹಾರ ಸೇವನೆಯಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು ಮಧುಮೇಹವನ್ನು ಸಹ ನಿಯಂತ್ರಿಸುತ್ತದೆ. ರಾಗಿಯ ಆರೋಗ್ಯ ಪ್ರಯೋಜನಗಳು ಬಲ್ಲವನಿಗೆ ಖಂಡಿತ ರೋಗವಿಲ್ಲ!" : ಆಧುನಿಕ ಜಗತ್ತಿನಲ್ಲಿ ಬೊಜ್ಜು ದೊಡ್ಡ ಸಮಸ್ಯೆಯಾಗಿದೆ. ಬೊಜ್ಜು ವಿವಿಧ ರೀತಿಯ ಸಮಸ್ಯೆಗಳನ್ನು ಮತ್ತು ರೋಗಗಳನ್ನು ಹೊಂದುವಂತೆ ಮಾಡಿ, ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಹೀಗಾಗಿ ವೇಗವಾಗಿ ತೂಕ ಇಳಿಸಿಕೊಳ್ಳಲು ಎಲ್ಲರೂ ಬಯಸುತ್ತಾರೆ. ಇನ್ನು ಆರೋಗ್ಯವಂತರು ಕೂಡ ಕೊಬ್ಬನ್ನು ಕಡಿಮೆ ಮಾಡಲು ಸದಾ ದೇಹವನ್ನು ಸದೃಢವಾಗಿರಿಸಿಕೊಳ್ಳಲು ಬಯಸುತ್ತಾರೆ. ಆಧುನಿಕ ಜಗತ್ತಿನಲ್ಲಿ ಬೊಜ್ಜು ದೊಡ್ಡ ಸಮಸ್ಯೆಯಾಗಿದೆ. ಬೊಜ್ಜು ವಿವಿಧ ರೀತಿಯ ಸಮಸ್ಯೆಗಳನ್ನು ಮತ್ತು ರೋಗಗಳನ್ನು ಹೊಂದುವಂತೆ ಮಾಡಿ, ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಹೀಗಾಗಿ ವೇಗವಾಗಿ ತೂಕ ಇಳಿಸಿಕೊಳ್ಳಲು ಎಲ್ಲರೂ ಬಯಸುತ್ತಾರೆ. ಇನ್ನು ಆರೋಗ್ಯವಂತರು ಕೂಡ ಕೊಬ್ಬನ್ನು ಕಡಿಮೆ ಮಾಡಲು ಸದಾ ದೇಹವನ್ನು ಸದೃಢವಾಗಿರಿಸಿಕೊಳ್ಳಲು ಬಯಸುತ್ತಾರೆ. ಸಿರಿಧಾನ್ಯಗಳಲ್ಲಿ ಒಂದಾಗಿರುವಂತಹ ರಾಗಿಯನ್ನು ನಮ್ಮ ಕರ್ನಾಟಕದಲ್ಲೇ ಬಳಕೆ ಮಾಡುವುದು ಅಧಿಕ. ಇಲ್ಲಿ ರಾಗಿಯಿಂದ ರಾಗಿ ರೊಟ್ಟಿ ಹಾಗೂ ರಾಗಿ ಮುದ್ದರೆ ತಯಾರಿಸಿಕೊಂಡು ಆಹಾರ ಕ್ರಮದಲ್ಲಿ ಸೇವನೆ ಮಾಡುವರು. ರಾಗಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಬೇರೆಲ್ಲಾ ಧಾನ್ಯಗಳಿಗಿಂತಲೂ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಅಂಶವು ರಾಗಿಯಲ್ಲಿದೆ. ದೇಹದಲ್ಲಿ ಮೂಳೆ, ಹಲ್ಲು ಮತ್ತು ಉಗುರುಗಳ ಆರೋಗ್ಯ ಕಾಪಾಡಲು ಕ್ಯಾಲ್ಸಿಯಂ ಅತೀ ಅಗತ್ಯ. 100 ಗ್ರಾಂ ರಾಗಿಯಲ್ಲಿ 344 ಮಿ.ಗ್ರಾಂ. ಕ್ಯಾಲ್ಸಿಯಂ ಇದ್ದು, ಇದು ದೇಹಕ್ಕೆ ಲಾಭಕಾರಿ. ಬೆಳೆಯುತ್ತಿರುವ ಮಕ್ಕಳಿಗೆ ರಾಗಿ ನೀಡಿದರೆ ತುಂಬಾ ಒಳ್ಳೆಯದು. ಇನ್ನು ರಾಗಿ ಫೈಬರ್​ ಅಂಶ ಕೂಡ ಸಮೃದ್ಧವಾಗಿದೆ. ಇದು ಆಹಾರದ ಹಂಬಲವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಜೀರ್ಣಕ್ರಿಯೆಯ ವೇಗವನ್ನು ಕಾಪಾಡಿಕೊಳ್ಳುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ರಾಗಿ ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳು ಚಳಿಗಾಲದಲ್ಲಿ ರಾಗಿ ಹಿಟ್ಟಿನಿಂದ ಮಾಡಿದ ರೊಟ್ಟಿಗಳನ್ನು ತಿನ್ನಲು ಸೂಚಿಸಲಾಗುತ್ತದೆ.  ರಾಗಿ ಆಹಾರ ಸೇವನೆಯು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಯೌವ್ವನವನ್ನು ಕಾಪಾಡಿಕೊಳ್ಳಲು ರಾಗಿ ಆಹಾರ ಉತ್ತಮ. ಇದರಲ್ಲಿರುವ ಮೆಥಿಯೋನಿನ್ ಮತ್ತು ಲೈಸಿನ್ ನಂತಹ ಅಗತ್ಯವಾದ ಅಮೈನೊ ಆಸಿಡ್ ಅಂಶಗಳು ಚರ್ಮದ ಅಂಗಾಂಶಗಳನ್ನು ಸುಕ್ಕುಗಳು ಮತ್ತು ವಯಸ್ಸಾದ ಚಿಹ್ನೆಗಳಿಂದ ರಕ್ಷಿಸುತ್ತದೆ. ಇದಲ್ಲದೆ, ರಾಗಿ ಸೇವನೆ ಮೂಲಕ ದೇಹದಲ್ಲಿನ ವಿಟಮಿನ್ ಡಿ ಕೊರತೆಯನ್ನು ನೀಗಿಸಬಹುದು. ರಾಗಿ ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಮುಕ್ತವಾಗಿದೆ. ಇದು ಕಬ್ಬಿಣ, ಮೆಗ್ನೀಸಿಯಮ್ ಮತ್ತು ಫೈಬರ್ ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ರಾಗಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮತ್ತು ಬಿಪಿ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ. ರಾಗಿಯು ಆತಂಕ, ನಿದ್ರಾಹೀನತೆ ಮತ್ತು ಖಿನ್ನತೆ ದೂರವಿಡಲು ಸಹಕಾರಿ. ರಾಗಿ ಸೇವನೆ ಮಾಡಿದರೆ, ಅದರಿಂದ ದೇಹ ಮತ್ತು ಮನಸ್ಸು ಉಲ್ಲಾಸಿತವಾಗುವುದು. ರಾಗಿ ಸೇವನೆ ಮಾಡಿದರೆ, ಮೈಗ್ರೇನ್ ಕೂಡ ಕಡಿಮೆ ಆಗುವುದು ಎಂದು ಕೆಲವು ಅಧ್ಯಯನಗಳು ಹೇಳಿವೆ. ಮುಂದಿನ ಸಲ ಮನಸ್ಸಿಗೆ ಉಲ್ಲಾಸ ಬೇಕಿದ್ದರೆ, ರಾಗಿ ಸೇವನೆ ಮಾಡಿ. ಹೇಗೆ ರಾಗಿಯನ್ನು ಸೇವಿಸಬಹುದು? ಬೆಳಿಗ್ಗೆ ಉಪಾಹಾರದಲ್ಲಿ ಮೊಳಕೆಯೊಡೆದ ರಾಗಿಯನ್ನು ತಿನ್ನಬಹುದು. ರಾಗಿ ಅಂಬಲಿಯನ್ನು ತಯಾರಿಸಿ ಸಹ ಕುಡಿಯಬಹುದು. ರಾಗಿ ಇಡ್ಲಿ ಮತ್ತು ದೋಸೆಯನ್ನು ತಯಾರಿಸಬಹುದು. ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರು ರಾಗಿ ತಿನ್ನಬಾರದು. ಥೈರಾಯ್ಡ್ ರೋಗಿಗಳು ಸಹ ರಾಗಿ ತಿನ್ನಬಾರದು. ದೈನಂದಿನ ಆಹಾರದಲ್ಲಿ ರಾಗಿಯನ್ನು ಸೇರಿಸುವ ಮೂಲಕ, ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಪಡೆಯಬಹುದು ಮತ್ತು ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು.

10/13/20220 min read

Satwik Food

ಸಾತ್ವಿಕ ಆಹಾರ ಪದ್ಧತಿ: ಈ ಆಹಾರ ತೆಗೆದುಕೊಂಡರೆ, ದೇಹದ ರೋಗ ನಿರೋಧಕ ಶಕ್ತಿ ವೃದ್ಧಿ. ಏನಿದು ಸಾತ್ವಿಕ ಆಹಾರ ಅಂತೀರಾ?. ನಮ್ಮ ಆಹಾರ ಸೇವನೆಯಲ್ಲಿ ಹಲವಾರು ವಿಧಾನಗಳಿವೆ. ಒಬ್ಬೊಬ್ಬರು ಒಂದೊಂದು ಆಹಾರ ಪದ್ದತಿಯನ್ನು ಇಷ್ಟ ಪಡುತ್ತಾರೆ. ಆದರೆ ಎಲ್ಲದಕ್ಕಿಂತ ಸಾತ್ವಿಕ ಆಹಾರ ಪದ್ಧತಿ ತುಂಬಾ ಪ್ರಚಲಿತ ಪಡೆದಿದೆ. ಏಕೆಂದರೆ ಇದರ ಸರಳ ಗುಣ ಲಕ್ಷಣಗಳು, ಜನರಿಗೆ ಇದರಿಂದ ಸಿಗುವ ಒಳ್ಳೆಯ ಆರೋಗ್ಯಕರ ಜೀವನ ಹಾಗು ಯಾವುದೇ ಬಗೆಯ ರೋಗಲಕ್ಷಣಗಳು ಇದರ ಪ್ರಭಾವದಿಂದ ಅತ್ಯಂತ ವೇಗವಾಗಿ ಮತ್ತು ತುಂಬಾ ಪರಿಣಾಮಕಾರಿಯಾಗಿ ಗುಣ ಆಗುವ ಕಾರಣದಿಂದ ಸಾತ್ವಿಕ ಆಹಾರ ಪದ್ಧತಿ ತುಂಬಾ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ. ವ್ಯಕ್ತಿಗಳು ತಿನ್ನುವ ಆಹಾರವು ಅವರ ಆಲೋಚನಾ ಪ್ರಕ್ರಿಯೆಗಳು ಮತ್ತು ಸ್ವಭಾವದ ಮೇಲೆ ಪ್ರಭಾವ ಬೀರುತ್ತದೆ ಮತ್ತು ಪ್ರತಿಯಾಗಿ. ಭಗವದ್ಗೀತೆಯ ಪ್ರಕಾರ, ಒಬ್ಬ ವ್ಯಕ್ತಿಯು ಸೇವಿಸುವ ಆಹಾರವು ಅವರ ಆಲೋಚನೆಗಳು, ಸ್ವಭಾವ, ಮಾನಸಿಕ ಯೋಗಕ್ಷೇಮ ಮತ್ತು ಆರೋಗ್ಯದ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ಭಗವದ್ಗೀತೆ 17.7 ಆಹಾರದ ಮಹತ್ವವನ್ನು ಉಲ್ಲೇಖಿಸುತ್ತದೆ. ತುಂಬಾ ಜನರಿಗೆ ಯಾವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು ಮತ್ತು ಯಾವ ಆಹಾರವನ್ನು ಸೇವಿಸಿದರೆ ನಮ್ಮ ದೇಹಕ್ಕೆ ಕಿಂಚಿತ್ತೂ ಲಾಭವಿಲ್ಲ ಎನ್ನುವುದರ ಬಗ್ಗೆ ಅನೇಕ ಗೊಂದಲಗಳಿರುತ್ತವೆ. ಇಂತವರು ಯಾವುದೋ ಕರಿದಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ತಿಂದು ತಮ್ಮ ಆರೋಗ್ಯವನ್ನು ಹದಗೆಡಿಸಿ ಕೊಳ್ಳುವುದಕ್ಕಿಂತ, ಸಾತ್ವಿಕ ಆಹಾರವನ್ನು ರೂಢಿಸಿಕೊಳ್ಳುವುದು ಉತ್ತಮ ಅನ್ನಿಸುತ್ತದೆ. ಹಾಗಾದರೆ ಈ ಸಾತ್ವಿಕ ಆಹಾರ ಹಾಗೂ ಅದರ ಸೇವನೆಯಿಂದ ದೇಹಕ್ಕೆ ಉಂಟಾಗುವ ಪ್ರಯೋಜನಗಳನ್ನು ಕುರಿತು ಅರಿತುಕೊಳ್ಳೋಣ. ಏನಿದು ಸಾತ್ವಿಕ ಆಹಾರ ಅಂತೀರಾ? ಸಾತ್ವಿಕ ಆಹಾರವು ಆಯುರ್ವೇದದ ಅಂಶಗಳನ್ನು ಆಧರಿಸಿದ ಶುದ್ಧ ಸಸ್ಯಾಹಾರವಾಗಿದೆ. ಈ ಆಹಾರದಲ್ಲಿ ಫೈಬರ್ ಅಂಶ ಜಾಸ್ತಿ ಇದ್ದು, ಕೊಬ್ಬಿನಾಂಶವು ತುಂಬಾ ಕಡಿಮೆ ಇರುತ್ತದೆ. ಇಂತಹ ಆಹಾರವು ನಮ್ಮನ್ನು ದೈಹಿಕವಾಗಿ ಆರೋಗ್ಯವಾಗಿ ಇರಿಸುವುದಲ್ಲದೆ, ಮಾನಸಿಕ ಆರೋಗ್ಯಕ್ಕೂ ತುಂಬಾ ಸಹಾಯಕವಾಗಿದೆ. ಸಾತ್ವಿಕ ಆಹಾರ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತವೆ. ಈ ಆಹಾರವನ್ನು ಸೇವಿಸುವುದನ್ನು ರೂಢಿಸಿಕೊಂಡರೆ, ನಮ್ಮ ದೇಹಕ್ಕೆ ಹೆಚ್ಚಿನ ಫೈಬರ್, ಪೌಷ್ಟಿಕಾಂಶ ಲಭಿಸುತ್ತದೆ ಮತ್ತು ಇದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ. ಸತ್ವ ಎನ್ನುವ ಪದದಿಂದ ಸಾತ್ವಿಕ ಎನ್ನುವುದು ಬಂದಿದೆ. ಇದರರ್ಥ ಶುದ್ಧ, ಶಕ್ತಿ, ಸ್ವಚ್ಛ ಮತ್ತು ಬಲಿಷ್ಠ ಎಂದು ಹೇಳಬಹುದು. ಸೂಕ್ಷ್ಮಪೋಷಕಾಂಶಗಳಿಂದ ಸಮೃದ್ಧವಾಗಿರುವಂತಹ ಸಾತ್ವಿಕ ಆಹಾರದ ಬಗ್ಗೆ ಯೋಗದಲ್ಲೂ ಹೇಳಲಾಗಿದೆ. ಇದರಲ್ಲಿ ಸ್ವಚ್ಛ ಆಹಾರವನ್ನು ಪ್ರೋತ್ಸಾಹಿಸಲಾಗುತ್ತದೆ. ದೈಹಿಕ ಬಲ ಹೆಚ್ಚಿಸುವುದು, ಒಳ್ಳೆಯ ಆರೋಗ್ಯ ಹಾಗೂ ದೀರ್ಘ ಜೀವನ ನೀಡುವುದು. ಇದು ತಿನ್ನುವ ಆಹಾರದತ್ತ ಗಮನಹರಿಸುವುದು ಅಥವಾ ಭಾವನೆಗಳನ್ನು ಸಮತೋಲನದಲ್ಲಿ ಇಡುವ, ದೇಹದಿಂದ ವಿಷಕಾರಿ ಅಂಶ ಹೊರಹಾಕುವ, ಶಕ್ತಿ ನೀಡುವಂತಹ ಜೀವನ ಕ್ರಮವಾಗಿದೆ. ಇದು ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿಸುವುದು. ಆಹಾರ ಮತ್ತು ಗುಣಗಳು: ಗುಣ ಎಂದರೇನು? ಮೂರು ಗುಣಗಳು ಪಾರ್ಕೃತಿಯಲ್ಲಿನ ಶಕ್ತಿಯ ವಿವಿಧ ಗುಣಗಳ ಗುಂಪುಗಳಾಗಿವೆ (ಭೌತಿಕ ವಿಷಯ.) ಯಾವುದೇ ಜೀವಿಯು ಗುಣಗಳನ್ನು ಹೊಂದಿರುತ್ತದೆ ಮತ್ತು ಇದು ಮನಸ್ಸು, ದೇಹ ಮತ್ತು ಆತ್ಮ ಅಥವಾ ಪ್ರಜ್ಞೆಯ ಮೂರು "ಒಲವು" ಗಳಲ್ಲಿ ಒಂದಾಗಿದೆ. ಮೂರು ಗುಣಗಳೆಂದರೆ ಸತ್ವ, ರಜಸ್ ಮತ್ತು ತಾಮಸ ಗುಣಗಳು. ಈ ವರ್ಗಗಳು ನಮ್ಮ ಆರೋಗ್ಯ, ನಡವಳಿಕೆ, ಆಲೋಚನೆ ಮತ್ತು ಆಹಾರಕ್ರಮವನ್ನು ವ್ಯಾಖ್ಯಾನಿಸುತ್ತವೆ ಮತ್ತು ಪ್ರತಿಬಿಂಬಿಸುತ್ತವೆ. ಸಾತ್ವಿಕ ಆಹಾರವು ಸತ್ವ ಎಂದು ಕರೆಯಲ್ಪಡುವ ಮೂರು ಯೋಗ ಗುಣಗಳಲ್ಲಿ ಒಂದನ್ನು ( ಗುಣ ) ಒಳಗೊಂಡಿರುವ ಆಹಾರವನ್ನು ಆಧರಿಸಿದ ಆಹಾರವಾಗಿದೆ . ಆಹಾರ ವರ್ಗೀಕರಣದ ಈ ವ್ಯವಸ್ಥೆಯಲ್ಲಿ, ದೇಹದ ಶಕ್ತಿಯನ್ನು ಕಡಿಮೆ ಮಾಡುವ ಆಹಾರವನ್ನು ತಾಮಸಿಕ್ ಎಂದು ಪರಿಗಣಿಸಲಾಗುತ್ತದೆ , ಆದರೆ ದೇಹದ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ರಾಜಸಿಕ್ ಎಂದು ಪರಿಗಣಿಸಲಾಗುತ್ತದೆ . ಆಧುನಿಕ ಸಾಹಿತ್ಯದಲ್ಲಿ ಸಾತ್ವಿಕ ಆಹಾರವನ್ನು ಕೆಲವೊಮ್ಮೆ ಯೋಗದ ಆಹಾರ ಎಂದು ಕರೆಯಲಾಗುತ್ತದೆ. ನಾವು ತಿನ್ನುವ ಆಹಾರಗಳು ದೈಹಿಕ, ಭಾವನಾತ್ಮಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟದಲ್ಲಿ ನಮ್ಮ ಮೇಲೆ ಪರಿಣಾಮ ಬೀರುತ್ತವೆ. ಆಧ್ಯಾತ್ಮಿಕ ಮಾರ್ಗದ ಸಾಕ್ಷಾತ್ಕಾರದ ಕಡೆಗೆ ಮುನ್ನಡೆಯಲು ಆಹಾರಕ್ರಮವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾತ್ವಿಕ ಆಹಾರ ಪದ್ಧತಿಯಲ್ಲಿ ತುಂಬ ಸರಳವಾದ ಜೀವನ ಶೈಲಿಯ ಪದ್ಧತಿ ಅನುಸರಣೆ ಆಗುವುದರಿಂದ ಕಾಲಕಾಲಕ್ಕೆ ಒದಗುವ ತಾಜಾ ಹಣ್ಣು - ತರಕಾರಿಗಳು, ಕಾಳುಗಳು, ದ್ವಿದಳ ಧಾನ್ಯಗಳು, ಮೊಳಕೆ ಕಾಳುಗಳು, ಒಣಗಿದ ಬೀಜಗಳು, ಜೇನು ತುಪ್ಪ, ತಾಜಾ ಗಿಡಮೂಲಿಕೆಗಳು, ಹಾಲು ಮತ್ತು ಇನ್ನಿತರ ಡೈರಿ ಉತ್ಪನ್ನಗಳು, ಇತ್ಯಾದಿ ಎಲ್ಲವೂ ಸಹ ನಮ್ಮ ದೇಹಕ್ಕೆ ಸಾಕಷ್ಟು ಒಳ್ಳೆಯ ಆರೋಗ್ಯ ಲಾಭಗಳನ್ನು ತಂದು ಕೊಡುವಂತಹ ಆಹಾರಗಳೇ ಆಗಿರುತ್ತವೆ. ​ದೇಹದ ತೂಕ ನಿರ್ವಹಣೆ ಸಾತ್ವಿಕ ಆಹಾರದಲ್ಲಿ ನಾರಿನ ಅಂಶ ಮತ್ತು ಸಸ್ಯಗಳ ಸಂಬಂಧಿತ ಆಹಾರ ಹೆಚ್ಚಾಗಿರುವು ದರಿಂದ, ಒಬ್ಬ ಮನುಷ್ಯನ ದೇಹದ ಅಧಿಕ ತೂಕವನ್ನು ಅತ್ಯಂತ ಪರಿಣಾಮಕಾರಿಯಾಗಿ ಅಷ್ಟೇ ವೇಗವಾಗಿ ಕಡಿಮೆ ಮಾಡಬಲ್ಲ ಗುಣ ಲಕ್ಷಣಗಳಿವೆ. ಹಲವಾರು ಅಧ್ಯಯನಗಳು ಹೇಳಿರುವ ಹಾಗೆ ಮಾಂಸಾಹಾರಕ್ಕಿಂತ ಸಸ್ಯಾಹಾರ ಸೇವನೆ ದೇಹದ ಮಾಂಸ ಖಂಡಗಳ ಪ್ರಮಾಣವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ ದೇಹದಲ್ಲಿ ಹೆಚ್ಚಿರುವ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸುತ್ತದೆ. ಖಾಲಿ ಹೊಟ್ಟೆಗೆ ಇಂತಹ ಆಹಾರಗಳನ್ನು ತಿಂದರೆ, ದೇಹದ ತೂಕ ಇಳಿಯುವುದು! ​ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ ಸಾತ್ವಿಕ ಆಹಾರದಲ್ಲಿ ಹೆಚ್ಚು ಪೌಷ್ಟಿಕಾಂಶಗಳುಳ್ಳ ಆಹಾರ ಪದ್ಧತಿ ಸೇರಿರುವುದರಿಂದ ನಮ್ಮ ದೇಹಕ್ಕೆ ಸಾತ್ವಿಕ ಆಹಾರ ಸೇವಿಸುವ ನಿಟ್ಟಿನಲ್ಲಿ ನಾವು ಹಲವು ಬಗೆಯ ವಿಟಮಿನ್ ಅಂಶಗಳು, ಖನಿಜಾಂಶಗಳು, ಆಂಟಿ - ಆಕ್ಸಿಡೆಂಟ್ ಅಂಶಗಳು ಪ್ರೋಟೀನ್ ಅಂಶಗಳು ಮತ್ತು ಆರೋಗ್ಯಕರ ಕೊಬ್ಬಿನ ಅಂಶಗಳನ್ನು ಸೇರಿಸುತ್ತಾ ಹೋಗುತ್ತೇವೆ. ಇದು ನಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸಿ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತವೆ. ​ಸಾತ್ವಿಕ ಆಹಾರ ನಮ್ಮ ಸಂಪೂರ್ಣ ಆರೋಗ್ಯವನ್ನು ನಿರ್ವಹಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಪೌಷ್ಟಿಕಾಂಶ ಭರಿತ ಆಹಾರಗಳನ್ನು ನಮ್ಮ ದೇಹಕ್ಕೆ ಸೇರಿಸುವ ಮೂಲಕ ನಮ್ಮ ಕ್ಯಾನ್ಸರ್ ಮತ್ತು ಮಧುಮೇಹ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಸಾತ್ವಿಕ ಆಹಾರದ ಕೊಡುಗೆ ಬಹಳಷ್ಟಿದೆ. ​ಯಾವ ಆಹಾರಗಳನ್ನು ತಿನ್ನಬಾರದು ? ಸಾತ್ವಿಕ ಆಹಾರ ಪದ್ಧತಿಯನ್ನು ಅನುಸರಿಸುತ್ತಿರುವ ಜನರು ಈ ಕೆಳಗಿನ ಆಹಾರಗಳನ್ನು ಸೇವಿಸಬಾರದು ಎಂದು ತಿಳಿಸಲಾಗಿದೆ. ಆಹಾರಗಳಿಗೆ ಸಕ್ಕರೆ ಅಂಶಗಳನ್ನು ಸೇರಿಸಿದ ವಿಚಾರವಾಗಿ ನಾವು ಮನೆಯಲ್ಲಿ ಬಳಸುವ ಸಕ್ಕರೆ, ಹೆಚ್ಚಿನ ಫ್ರಕ್ಟೋಸ್ ಅಂಶವನ್ನು ಹೊಂದಿರುವ ಕಾರ್ನ್ ಸಿರಪ್, ಕ್ಯಾಂಡಿ ಮತ್ತು ಸೋಡಾ ​ಕರಿದ ಆಹಾರ ಪದಾರ್ಥಗಳು ಫ್ರೆಂಚ್ ಫ್ರೈಸ್, ಫ್ರೈಡ್ ವೆಜಿಟೇಬಲ್ಸ್, ಫ್ರೈಡ್ ಪೇಸ್ಟ್ರಿ ಇತ್ಯಾದಿ. ಸಂಸ್ಕರಿಸಿದ ಆಹಾರಗಳು : - ಚಿಪ್ಸ್, ಫಾಸ್ಟ್ ಫುಡ್, ಮೈಕ್ರೋವೇವ್ ನಲ್ಲಿ ತಯಾರು ಮಾಡಿದ, ಫ್ರೋಜ್ ಮಾಡಿದ ಆಹಾರ ಇತ್ಯಾದಿ. ರಿಫೈನ್ ಮಾಡಿದ ಕಾಳುಗಳ ಉತ್ಪನ್ನಗಳು : - ಬಿಳಿ ಬ್ರೆಡ್, ಕೇಕ್, ಕುಕೀಸ್ ಇತ್ಯಾದಿ ಪ್ರಾಣಿಯ ಮಾಂಸಾಹಾರಗಳು : - ಮೀನು, ಕೋಳಿ ಮೊಟ್ಟೆ, ಚಿಕನ್ ಇತ್ಯಾದಿ ಕೆಲವು ಹಣ್ಣು - ತರಕಾರಿಗಳು : - ಈರುಳ್ಳಿ ಉಪ್ಪಿನಕಾಯಿ ಬೆಳ್ಳುಳ್ಳಿ ಕೆಲವು ಪಾನೀಯಗಳು : - ಕಾಫಿ, ಆಲ್ಕೋಹಾಲ್, ಸಕ್ಕರೆ ಸೇರಿಸಿದ ಪಾನೀಯಗಳು ಇತ್ಯಾದಿ ​ನೆನಪಿಡಬೇಕಾದ ಅಂಶಗಳು ಸಾತ್ವಿಕ ಆಹಾರ ಪದ್ಧತಿಯನ್ನು ಅನುಸರಿಸುತ್ತಿರುವ ಜನರು ಈ ಒಂದು ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

9/15/20220 min read

Best Diet Practice tips

ನೀವು ವರ್ಕೌಟ್ ಮಾಡುವ ಮುನ್ನ ಯಾವ ಆಹಾರವನ್ನು ತಿನ್ನುತ್ತೀರಿ ಎನ್ನುವುದು ಮುಖ್ಯವಾಗಿರುತ್ತದೆ. ಬೇಕಾಬಿಟ್ಟಿ ಜಂಕ್‌ಫುಡ್ ತಿನ್ನೋದು, ಮೈ ಕರಗಿಸಿಕೊಳ್ಳೋಕೆ ಜಿಮ್, ಡಯೆಟ್ ಅಂತ ಸರ್ಕಸ್ ಮಾಡೋದು ಈಗಿನ ಜನರೇಷನ್‌ನ ಲೈಫ್ ಸ್ಟೈಲ್. ಸಣ್ಣಗಾಗ್ಬೇಕು ಅನ್ನೋ ಹಂಬಲದಲ್ಲಿ ಕೆಲವರು ಆಹಾರವನ್ನು ತಿನ್ನುವುದನ್ನು ನಿಲ್ಲಿಸಿ ಡಯೆಟ್ ಮಾಡ್ತಾರೆ. ಆದ್ರೆ ಸಣ್ಣಗಾಗೋಕೆ ನೀವು ಫುಡ್ ಸ್ಕಿಪ್ ಮಾಡ್ಬೇಕಾಗಿಲ್ಲ. ಇವತ್ತಿನ ದಿನಗಳಲ್ಲಿ ಆಧುನಿಕ ಜೀವನಶೈಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ದೈಹಿಕ ಚಟುವಟಿಕೆಯಿಲ್ಲದೆ ಬರೀ ಮೆದುಳಿಗೆ ಒತ್ತಡ ಹಾಕಿ ಮಾಡುವ ಕೆಲಸ, ಹೊತ್ತು ಗೊತ್ತಿಲ್ಲದ ಸಮಯದಲ್ಲಿ ಆಹಾರ ಸೇವನೆ, ಅದರಲ್ಲೂ ಪಿಜ್ಜಾ, ಬರ್ಗರ್ ಮೊದಲಾದ ಅತಿಯಾದ ಜಂಕ್ ಫುಡ್ ಸೇವನೆಯಿಂದ ಆಗುತ್ತಿರುವ ಸಮಸ್ಯೆಗಳು ಒಂದಾ ಎರಡಾ. ಸ್ಥೂಲಕಾಯ ಇಂದಿನ ದಿನಗಳಲ್ಲಿ ಹಲವರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆ. ಸಣ್ಣಗಾಗಬೇಕು ಅನ್ನೋ ಹಂಬಲದಲ್ಲಿ ಬೇರೆ ಬೇರೆ ರೀತಿಯಲ್ಲಿ ಡಯೆಟ್ ಮಾಡಿ ಟ್ರೈ ಮಾಡ್ತಾರೆ. ಫುಡ್ ಸ್ಕಿಪ್ ಮಾಡೋದು, ತಿನ್ನೋ ಆಹಾರದ ಪ್ರಮಾಣವನ್ನು ಕಡಿಮೆ ಮಾಡುವುದು ಹೀಗೆ ನಾನಾ ರೀತಿಯ ಸರ್ಕಸ್ ಮಾಡ್ತಾರೆ. ನಿಮ್ಮ ಆಹಾರದಲ್ಲಿ ಯಾವ ಆಹಾರವನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ, ಏಕೆಂದರೆ ಜನರು ತೂಕವನ್ನು ಕಳೆದುಕೊಳ್ಳಲು ಆಹಾರದಲ್ಲಿ ಏನು ತಿನ್ನಬೇಕು ಎಂದು ತಿಳಿಯಲು ಪ್ರಯತ್ನಿಸುತ್ತಾರೆ, ಆದರೆ ಅವರು ಏನು ತಿನ್ನಬಾರದು ಎಂಬ ಅಂಶಕ್ಕೆ ಗಮನ ಕೊಡುವುದಿಲ್ಲ. ನೀವು ಹೊಟ್ಟೆಯನ್ನು ಕಡಿಮೆ ಮಾಡಲು ಬಯಸಿದರೆ ಕಡಿಮೆ ಕಾರ್ಬೋಹೈಡ್ರೇಟ್ ಆಹಾರವನ್ನು ಮಾತ್ರ ತೆಗೆದುಕೊಳ್ಳಿ. ಬಿಳಿ ಅಕ್ಕಿ, ಬಿಸ್ಕತ್ತುಗಳು ಮತ್ತು ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿಯಂತಹ ಸರಳ ಕಾರ್ಬೋಹೈಡ್ರೇಟ್‌ಗಳು ಹೆಚ್ಚು ಸಕ್ಕರೆಯನ್ನು ಹೊಂದಿರುತ್ತವೆ. ಇದು ಹಾನಿಕಾರಕವಾಗಿದೆ. ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಾದ ರಾಗಿ ರೊಟ್ಟಿ, ಓಟ್ಸ್ ಅಥವಾ ಕಂದು ಅಕ್ಕಿಯ ಸೇವನೆಯು ಪ್ರಯೋಜನಕಾರಿಯಾಗಿದೆ. ತೂಕವನ್ನು ಕಳೆದುಕೊಳ್ಳುವುದು ಸುಲಭವಲ್ಲ, ಆದರೆ ನೀವು ಸರಿಯಾಗಿ ಯೋಜಿಸಿ ಕೆಲಸ ಮಾಡಿದರೆ ಅದು ಕಷ್ಟಕರವಲ್ಲ. ಎಷ್ಟೇ ಕಸರತ್ತು ಮಾಡಿದರೂ ಜಿಮ್ ನಲ್ಲಿ ವರ್ಕೌಟ್ ಮಾಡಿದ ನಂತರ ಬೆವರು ಹರಿದರೂ ಸರಿಯಾದ ಆಹಾರ ಪದ್ಧತಿ ಪಾಲಿಸದಿದ್ದರೆ ಎಲ್ಲವೂ ವ್ಯರ್ಥ. ಹಾಗಾದರೆ ತೂಕ ಇಳಿಸಿಕೊಳ್ಳಲು ಆಹಾರದಲ್ಲಿ ಏನು ತೆಗೆದುಕೊಳ್ಳಬೇಕು, ಏನು ಮಾಡಬಾರದು ಎಂದು ಇಲ್ಲಿ ತಿಳಿಯಿರಿ. ನಿಮ್ಮ ಮನಸಲ್ಲಿ ಜಿಮ್ ಗೆ ಹೋಗಿ ಬಾಡಿ ಬಿಲ್ಡ್ ಮಾಡುವ ಆಸೆ ಇದ್ದರೆ ಖಂಡಿತವಾಗಿಯೂ ನಮ್ಮ ದೇಹಕ್ಕೆ ಏನು ಬೇಕು ಎನ್ನುವುದನ್ನು ನಾವು ಗಮನಿಸಬೇಕು. ಮುಖ್ಯವಾಗಿ ಬಾಡಿ ಬಿಲ್ಡ್ ಮಾಡಬೇಕು ಎನ್ನುವುದು ನಿಮ್ಮ ಯೋಚನೆಯಾದರೆ ನಿಮಗೆ ಹೆಚ್ಚುವರಿ ಕ್ಯಾಲೋರಿಗಳು, ಪ್ರೊಟೀನ್ ಗಳ ಅಗತ್ಯತೆ ಇರುತ್ತದೆ. ಹೀಗಿದ್ದಾಗ ನೀವು ಕ್ಯಾಲೋರಿಗಳು, ಪ್ರೊಟೀನ್ ಗಳಿರುವ ಆಹಾರವನ್ನೇ ಸೇವಿಸಬೇಕು.

6/30/20220 min read

Subscribe to our newsletter