

My post content


Best Diet Practice tips
ನೀವು ವರ್ಕೌಟ್ ಮಾಡುವ ಮುನ್ನ ಯಾವ ಆಹಾರವನ್ನು ತಿನ್ನುತ್ತೀರಿ ಎನ್ನುವುದು ಮುಖ್ಯವಾಗಿರುತ್ತದೆ. ಬೇಕಾಬಿಟ್ಟಿ ಜಂಕ್‌ಫುಡ್ ತಿನ್ನೋದು, ಮೈ ಕರಗಿಸಿಕೊಳ್ಳೋಕೆ ಜಿಮ್, ಡಯೆಟ್ ಅಂತ ಸರ್ಕಸ್ ಮಾಡೋದು ಈಗಿನ ಜನರೇಷನ್‌ನ ಲೈಫ್ ಸ್ಟೈಲ್. ಸಣ್ಣಗಾಗ್ಬೇಕು ಅನ್ನೋ ಹಂಬಲದಲ್ಲಿ ಕೆಲವರು ಆಹಾರವನ್ನು ತಿನ್ನುವುದನ್ನು ನಿಲ್ಲಿಸಿ ಡಯೆಟ್ ಮಾಡ್ತಾರೆ. ಆದ್ರೆ ಸಣ್ಣಗಾಗೋಕೆ ನೀವು ಫುಡ್ ಸ್ಕಿಪ್ ಮಾಡ್ಬೇಕಾಗಿಲ್ಲ. ಇವತ್ತಿನ ದಿನಗಳಲ್ಲಿ ಆಧುನಿಕ ಜೀವನಶೈಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ದೈಹಿಕ ಚಟುವಟಿಕೆಯಿಲ್ಲದೆ ಬರೀ ಮೆದುಳಿಗೆ ಒತ್ತಡ ಹಾಕಿ ಮಾಡುವ ಕೆಲಸ, ಹೊತ್ತು ಗೊತ್ತಿಲ್ಲದ ಸಮಯದಲ್ಲಿ ಆಹಾರ ಸೇವನೆ, ಅದರಲ್ಲೂ ಪಿಜ್ಜಾ, ಬರ್ಗರ್ ಮೊದಲಾದ ಅತಿಯಾದ ಜಂಕ್ ಫುಡ್ ಸೇವನೆಯಿಂದ ಆಗುತ್ತಿರುವ ಸಮಸ್ಯೆಗಳು ಒಂದಾ ಎರಡಾ. ಸ್ಥೂಲಕಾಯ ಇಂದಿನ ದಿನಗಳಲ್ಲಿ ಹಲವರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆ. ಸಣ್ಣಗಾಗಬೇಕು ಅನ್ನೋ ಹಂಬಲದಲ್ಲಿ ಬೇರೆ ಬೇರೆ ರೀತಿಯಲ್ಲಿ ಡಯೆಟ್ ಮಾಡಿ ಟ್ರೈ ಮಾಡ್ತಾರೆ. ಫುಡ್ ಸ್ಕಿಪ್ ಮಾಡೋದು, ತಿನ್ನೋ ಆಹಾರದ ಪ್ರಮಾಣವನ್ನು ಕಡಿಮೆ ಮಾಡುವುದು ಹೀಗೆ ನಾನಾ ರೀತಿಯ ಸರ್ಕಸ್ ಮಾಡ್ತಾರೆ. ನಿಮ್ಮ ಆಹಾರದಲ್ಲಿ ಯಾವ ಆಹಾರವನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ, ಏಕೆಂದರೆ ಜನರು ತೂಕವನ್ನು ಕಳೆದುಕೊಳ್ಳಲು ಆಹಾರದಲ್ಲಿ ಏನು ತಿನ್ನಬೇಕು ಎಂದು ತಿಳಿಯಲು ಪ್ರಯತ್ನಿಸುತ್ತಾರೆ, ಆದರೆ ಅವರು ಏನು ತಿನ್ನಬಾರದು ಎಂಬ ಅಂಶಕ್ಕೆ ಗಮನ ಕೊಡುವುದಿಲ್ಲ. ನೀವು ಹೊಟ್ಟೆಯನ್ನು ಕಡಿಮೆ ಮಾಡಲು ಬಯಸಿದರೆ ಕಡಿಮೆ ಕಾರ್ಬೋಹೈಡ್ರೇಟ್ ಆಹಾರವನ್ನು ಮಾತ್ರ ತೆಗೆದುಕೊಳ್ಳಿ. ಬಿಳಿ ಅಕ್ಕಿ, ಬಿಸ್ಕತ್ತುಗಳು ಮತ್ತು ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿಯಂತಹ ಸರಳ ಕಾರ್ಬೋಹೈಡ್ರೇಟ್‌ಗಳು ಹೆಚ್ಚು ಸಕ್ಕರೆಯನ್ನು ಹೊಂದಿರುತ್ತವೆ. ಇದು ಹಾನಿಕಾರಕವಾಗಿದೆ. ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಾದ ರಾಗಿ ರೊಟ್ಟಿ, ಓಟ್ಸ್ ಅಥವಾ ಕಂದು ಅಕ್ಕಿಯ ಸೇವನೆಯು ಪ್ರಯೋಜನಕಾರಿಯಾಗಿದೆ. ತೂಕವನ್ನು ಕಳೆದುಕೊಳ್ಳುವುದು ಸುಲಭವಲ್ಲ, ಆದರೆ ನೀವು ಸರಿಯಾಗಿ ಯೋಜಿಸಿ ಕೆಲಸ ಮಾಡಿದರೆ ಅದು ಕಷ್ಟಕರವಲ್ಲ. ಎಷ್ಟೇ ಕಸರತ್ತು ಮಾಡಿದರೂ ಜಿಮ್ ನಲ್ಲಿ ವರ್ಕೌಟ್ ಮಾಡಿದ ನಂತರ ಬೆವರು ಹರಿದರೂ ಸರಿಯಾದ ಆಹಾರ ಪದ್ಧತಿ ಪಾಲಿಸದಿದ್ದರೆ ಎಲ್ಲವೂ ವ್ಯರ್ಥ. ಹಾಗಾದರೆ ತೂಕ ಇಳಿಸಿಕೊಳ್ಳಲು ಆಹಾರದಲ್ಲಿ ಏನು ತೆಗೆದುಕೊಳ್ಳಬೇಕು, ಏನು ಮಾಡಬಾರದು ಎಂದು ಇಲ್ಲಿ ತಿಳಿಯಿರಿ. ನಿಮ್ಮ ಮನಸಲ್ಲಿ ಜಿಮ್ ಗೆ ಹೋಗಿ ಬಾಡಿ ಬಿಲ್ಡ್ ಮಾಡುವ ಆಸೆ ಇದ್ದರೆ ಖಂಡಿತವಾಗಿಯೂ ನಮ್ಮ ದೇಹಕ್ಕೆ ಏನು ಬೇಕು ಎನ್ನುವುದನ್ನು ನಾವು ಗಮನಿಸಬೇಕು. ಮುಖ್ಯವಾಗಿ ಬಾಡಿ ಬಿಲ್ಡ್ ಮಾಡಬೇಕು ಎನ್ನುವುದು ನಿಮ್ಮ ಯೋಚನೆಯಾದರೆ ನಿಮಗೆ ಹೆಚ್ಚುವರಿ ಕ್ಯಾಲೋರಿಗಳು, ಪ್ರೊಟೀನ್ ಗಳ ಅಗತ್ಯತೆ ಇರುತ್ತದೆ. ಹೀಗಿದ್ದಾಗ ನೀವು ಕ್ಯಾಲೋರಿಗಳು, ಪ್ರೊಟೀನ್ ಗಳಿರುವ ಆಹಾರವನ್ನೇ ಸೇವಿಸಬೇಕು.
6/30/2022